ಭೂರೆ ಲಾಲ್ (೨೦ ಮಾರ್ಚ್ ೧೯೩೮) ಅವರು ಅಶೋಕಚಕ್ರ ಸನ್ಮಾನಿತರು. ಇವರು ಮಧ್ಯಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದವರು. ಅಶೋಕಚಕ್ರದ ಗೌರವಕ್ಕೆ ಪಾತ್ರರಾದ ಮೊದಲ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಇವರದ್ದು. == ಹಿನ್ನೆಲೆ == ಶ್ರೀ ಭೂರೇಲಾಲ್ ಅವರು ೨೦ ಮಾರ್ಚ್ ೧೯೩೮ ರಂದು ಮಧ್ಯಪ್ರದೇಶದ ಗುನಾ ಜಿಲ್ಲೆಯ ಬಜರಂಗಗಡ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಶ್ರೀ ನನ್ಹುಲಾಲ್. == ವೃತ್ತಿಜೀವನ == ಶ್ರೀ ಭೂರೇಲಾಲ್ ಅವರು ೨೦ ಜೂನ್ ೧೯೬೫ ರಂದು ಮಧ್ಯಪ್ರದೇಶ ಪೊಲೀಸ್ ಇಲಾಖೆಗೆ ಸೇರಿದರು. ಅವರು ೭ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. == ಘಟನೆಯ ವಿವರ == ಮಧ್ಯ ಪ್ರದೇಶದ ಗುನಾ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಖ್ಯಾತ ದರೋಡೆಕೋರ ನಹರ್ ಸಿಂಗ್‌ ಲೂಟಿ ಮಾಡುತ್ತಿದ್ದ. ಹಳ್ಳಿಗಳನ್ನು ಕೊಳ್ಳೆಹೊಡೆಯುತ್ತಿದ್ದ ಮತ್ತು ಪೊಲೀಸರಿಗೆ ತಲೆನೋವಾಗಿದ್ದ. ಜುಲೈ ೧೪, ೧೫ ರ ರಾತ್ರಿ ನಹರ್ ಸಿಂಗ್ ತನ್ನ ಗುಂಪಿನೊಂದಿಗೆ ಗಿಂಡ್ಖೋ ಕಾಡಿನಲ್ಲಿ ಅಡಗಿಕೊಂಡಿದ್ದಾನೆ ಎಂಬ ಸುದ್ದಿ ಬಂದಿತು. ಸುದ್ದಿಯನ್ನು ಪರಿಶೀಲಿಸಲು ಶ್ರೀ ಭೂರೇಲಾಲ್ ಸ್ವತಃ ಕಾಡಿಗೆ ಹೋಗಲು ನಿರ್ಧರಿಸಿದರು. ಇದೊಂದು ಅಪಾಯಕಾರಿ ನಡೆ. ಕಾಡಿನಲ್ಲಿ ನಹರ್ ಸಿಂಗ್ ಅಡಗಿಕೊಂಡಿದ್ದನ್ನು ಗಮನಿಸಿ ಈ ವಿಷಯವನ್ನು ತಮ್ಮ ಇಲಾಖೆಗೆ ತಿಳಿಸಿದರು. ಅದರೆ ಪೊಲೀಸ್ ಪಡೆ ಕರ್ಯಚರಣೆಯ ತಯಾರಿಗೆ ಕಾಡಿಗೆ ಬರಲು ಸ್ವಲ್ಪ ಸಮಯವಾಯಿತು. ಇದನ್ನರಿತ ಶ್ರೀ ಭೂರೇಲಾಲ್ ದರೋಡೆಕೋರರು ಕಾಡನ್ನು ಬಿಡದಂತೆ ಎಚ್ಚರ ವಹಿಸಿದ್ದರು. ತಮ್ಮ ಬಂದೂಕನ್ನು ಸಿಡ್ಡಪರಿಸಿಕೊಂಡು ಡಕಾಯಿತರ ಹತ್ತಿರ ತಲುಪಿದರು. ಭೂರೇಲಾಲ್ ಅವರನ್ನು ನೋಡಿದ ನಹರ್ ಸಿಂಗ್ ಇವರ ಮೇಲೆ ಗುಂಡಿನ ಅಕ್ರಮಣ ಮಾಡಿದ. ಇದನ್ನ ನಿರೀಕ್ಷಿಸಿದ ಭೋರೆಲಾಲ್ ಅವರು ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಿದ್ದರು. ಡಕಾಯಿತರ ಮೇಲೆ ಪ್ರತಿದಾಳಿಯನ್ನು ಸಹ ನಡೆಸುತ್ತಿದ್ದರು. ಶ್ರೀ ಭೂರೇಲಾಲ್ ಹೊಡೆದ ಒಂದು ಗುಂಡು ನಹರ್ ಸಿಂಗ್ ನನ್ನು ಹೊಡೆದು ಉರುಳಿಸಿತು. ಇದನ್ನ ನೋಡಿದ ನಹರ್ ಸಿಂಗನ ಸಂಗಾತಿಗಳು ಭೂರೇಲಾಲ್ ಮೇಲೆ ಆಕ್ರಮಣ ಮಾಡುವಷ್ಟರಲ್ಲಿ ಸಮಯಕ್ಕೆ ಸರಿಯಾಗಿ ಪೋಲೀಸರ ದಂಡು ಆಗಮಿಸಿ ಉಳಿದೆಲ್ಲಾ ಡಕಾಯಿತರನ್ನು ಬಂಧಿಸಿತು. == ಅಶೋಕ ಚಕ್ರ ಪ್ರಶಸ್ತಿ ಪುರಸ್ಕಾರ == ಶ್ರೀ ಭೂರೇಲಾಲ್ ಅವರು ತಮ್ಮ ಧೈರ್ಯ ಮತ್ತು ಶೌರ್ಯದಿಂದ ದರೋಡೆಕೋರ ನಹರ್ ಸಿಂಗ್ ನನ್ನು ಕೊಂದು ಅವನ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅವರ ಈ ಶೌರ್ಯ ಮತ್ತು ಧೈರ್ಯಕ್ಕಾಗಿ ಅವರಿಗೆ ಅಶೋಕ ಚಕ್ರ ವನ್ನು ನೀಡಲಾಯಿತು. == ಉಲ್ಲೇಖಗಳು ==